ಕರಿಯ ಐ ಲವ್ ಯು ಸಿ. ಪಿ ಯೋಗೇಶ್ವರ್ ಗೆ ವರವೋ. ಶಾಪವೋ. 2 ನಿಮಿಷ ಸಮಯ ಇದ್ದರೆ ಓದಿ
ನವೆಂಬರ್ 13 ರಂದು ನಡೆದ ಚನ್ನಪಟ್ಟಣ ಮರು ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ. ಪಿ ಯೋಗೇಶ್ವರ್ ನಡುವೆ ನಡೆದ ಚುನಾವಣಾ ರಣಾoಗಣದಲ್ಲಿ ಜಮೀರ್ ಅಹ್ಮದ್ ಖಾನ್ ಆಡಿದ ಮಾತೆ ಸಿ ಪಿ ಯೋಗೇಶ್ವರ್ ಗೆ ಮುಳುವಾಗಲಿದೆ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ.
ಇದ್ದಕ್ಕೆ ಪೂರಕವೆಂಬಂತೆ ನೆನ್ನೆ ಸುದ್ದಿಗೋಷ್ಠಿ ಅಲ್ಲಿ ಮಾತನಾಡಿದ ಸಿ. ಪಿ ಯೋಗೇಶ್ವರ್ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾತನಾಡುತ್ತಾ ಸಿ. ಪಿ ಯೋಗೇಶ್ವರ್ ಮುಸ್ಲಿಂ ಮತಗಳನ್ನು ಎಳೆಯುವ ಸಲುವಾಗಿ ಕೇಂದ್ರ ಖೈಗಾರಿಕಾ ಸಚಿವ ಎಚ್. ಡಿ ಕುಮಾರಸ್ವಾಮಿ ಅವರಿಗೆ ಕರಿಯ ಎನ್ನುವ ಮೂಲಕ ಇನ್ನೊಂದು ಸಮುದಾಯದ ಮತಗಳಿಗೆ ಪೆಟ್ಟು ಬಿದ್ದಿದೆ ಎಂದು ಸಿ. ಪಿ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ, ಈ ಹೇಳಿಕೆಯಲ್ಲಿ ತಾವು ಸೋಲುವ ಮುನ್ಸೂಚನೆ ನೀಡಿದಂತ್ತಾಗಿದೆ,
ಇತ್ತಾ ಎಚ್. ಡಿ ಕುಮಾರಸ್ವಾಮಿ ಮಾತನಾಡಿ ನಾವು ಕುಳ್ಳ ಕರಿಯ ಎಂದು ಕರೆಯುವ ಸಂಸ್ಕೃತಿಯಲ್ಲಿ ಬೆಳೆದಿಲ್ಲ ಇದೇನಾ ಗೌರವಯುತ ಸರ್ಕಾರ ನಡೆಸುವ ರೀತಿ ಎಂದು ಹರಿಹಾಯಿದಿದ್ದಾರೆ. ದೇವೇಗೌಡರು ಅವರ ಸೊಕ್ಕು ಮುರುಯುತ್ತೇನೆ ಗರ್ವ ಇಳಿಸುತ್ತೇನೆ ಎಂದು ಹೇಳಿದ್ದಾರೆ ಅದಕ್ಕೆ ಈ ಮಟ್ಟದ ಕೀಳು ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ. ನಾವು ರಾಜಕೀಯ ಸ್ನೇಹಿತರೆ ವಿನಃ ಆಪ್ತರಲ್ಲ ಎಂದು ಸಹ ಗುಡುಗ್ಗಿದ್ದಾರೆ,
ಇನ್ನು ಈ ಬಗ್ಗೆ ಕ್ಷಮೆ ಕೇಳುವಿರಾ ಎಂದು ಜಮೀರ್ ಅಹ್ಮದ್ ಖಾನ್ ಗೆ ಕೇಳಿದರೆ ನಾವು ಮೊದಲಿಂದಲೂ ಕುಳ್ಳ ಕರಿಯಣ್ಣ ಅಂತ ಮಾತನಾಡುತ್ತಾ ಬಂದಿದ್ದೇವೆ ಇವಾಗ ಅದರ ಬಗ್ಗೆ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಏನೇ ಆಗಲಿ ಕರಿಯ ಎನ್ನುವ ಪದ ಬಳಕೆ ಸಿ. ಪಿ ಯೋಗೇಶ್ವರ್ ಗೆ ವಾರವಾಗುತ್ತಾ. ಶಾಪವಾಗುತ್ತಾ ಫಲಿತಾಂಶದ ದಿನ ಹೊರಬೀಳಲಿದೆ
Published by
Twelvenewz.Com
Comments
Post a Comment