ರೈತರಿಗೆ ಶುಂಠಿ ತಂದ ಸಂಕಷ್ಟ
ನಮಸ್ಕಾರ ಸ್ನೇಹಿತರೆ,
2023 ರ ಸಾಲಿನ ಜೂನ್ ವೇಳೆಗೆ 8800/- ರೂ ಇದ್ದ ಶುಂಠಿ ದರ 2024 ಸಾಲಿನ ಜೂನ್ ವೇಳೆಗೆ 3300/- ರೂ ಗೆ ಬಂದಿಳಿದಿದ್ದು. ನಂತರ ಕ್ರಮೇಣ ಇಳಿಮುಖವಾಗಿ 1200/- ರೂ ಗೆ ಆಗಸ್ಟ್ ವೇಳೆಗೆ ಬಂದಿತ್ತು ನಂತರ ಸ್ವಲ್ಪ ಚೇತರಿಸಿಕೊಂಡ ಮಾರುಕಟ್ಟೆ ಇಂದಿನ ದಿನ 1600-1700 ರೂ ಪ್ರಸ್ತುತ ದರ ನಡಿಯುತಿದೆ. ಮೈಸೂರು. ಹುಣಸೂರು. ಪಿರಿಯಾಪಟ್ಟಣ. ಎಚ್ ಡಿ ಕೋಟೆ ಭಾಗದಲ್ಲಿ ಶುಂಠಿದುಬ್ಬರವಾಗಿದ್ದು. ಶುಂಠಿ ಕೊಳ್ಳಲು ವ್ಯಾಪಾರಿಗಳು ಮನಸು ತೋರುತಿಲ್ಲ. ಸರಿ ಸುಮಾರು ಒಂದು ಎಕರೆ ಗೆ 5 ರಿಂದ 6 ಲಕ್ಷದವರೆಗೆ ಶುಂಠಿಯ ಖರ್ಚು ಬಂದಿದ್ದು. ಅದರ ಅರ್ಧದಷ್ಟು ಹಣವು ರೈತರ ಕೈ ಸೇರುತಿಲ್ಲ. ಮುಂದಿನಗಳಲ್ಲಿ ಶಿವಮೊಗ್ಗ. ಶಿಕಾರಿಪುರ.ಹಾಸನ ಮುಂತಾದ ಕಡೆ ಶುಂಠಿ ಕಟಾವು ಮಾಡಲು ಪ್ರಾರಂಭಿಸಿದರೆ ಶುಂಠಿ ಬೆಲೆ ಇಳಿಮುಖವಾಗುತ್ತದೆ ಎನ್ನುವ ಬೀತಿ ರೈತರಲ್ಲಿ ಮನೆಮಾಡಿದೆ.
ದರದ ಇಳಿಮುಖಕ್ಕೆ ಪೂರೈಕೆಗಿಂತ ಅಧಿಕವಾಗಿ ಶುಂಠಿ ಬೆಳೆ ಬೆಳೆದಿರುವುದು ಕಾರಣ ಎನ್ನುತ್ತಿದ್ದಾರೆ ರೈತರು. ಇದರ ನಡುವೆ ದಲ್ಲಾಳಿಗಳ ಆವಳಿ ಯಿಂದ ರೈತರಿಗೆ ಇನ್ನಷ್ಟು ನಷ್ಟ ಎದುರಾಗುತ್ತಿದೆ. ಮಾಹಿತಿಯ ಪ್ರಕಾರ ಡಿಸೆಂಬರ್ ಕೊನೆಯ ವಾರ ಹೊರದೇಶದ ರಫ್ತು ನಿಲ್ಲುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮತ್ತ್ತೊಂಡೆದೆ ಶುಂಠಿಯ ದರ ಕುಸಿಯಲು ರೈತರು ಶುಂಠಿಯನ್ನು ತಾ ಮುಂದು ನಾ ಮುಂದು ಎಂದು ಕೊಡುತ್ತಿರುವುದು ಕಾರಣ ಎಂದು ಹೇಳಲಾಗುತ್ತಿದೆ. ಶುಂಠಿ ಕೃಷಿ ಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸರಿ ಸುಮಾರು 1000-2500 ಕೋಟಿ ಯಷ್ಟು ಹೂಡಿಕೆ ಹೆಚ್ಚಾಗುತಿದೆ ಎಂದು ಅಂದಾಜಿಸಲಾಗಿದೆ. ಎಲ್ಲರ ಆರೈಕೆ ಯಂತೆ ರೈತರಿಗೆ ದರ ಹೆಚ್ಚಳವಾಗಿ ರೈತರ ಮುಗದಲ್ಲಿ ಸಂತಸ ಕಾಣಲಿ ಎಂದು ಆರೈಸೋಣ,
ಬರಹಗಾರರು
ಪ್ರಶಾಂತ್ ಎಚ್ ವಿ
ಮೈಸೂರು
Comments
Post a Comment